ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
8ರಂದು ಕಟೀಲಿನ 6ನೇ ಯಕ್ಷಗಾನ ಮೇಳ ಸಮರ್ಪಣೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ನವ೦ಬರ್ 5 , 2013
ನವ೦ಬರ್ 5 , 2013

8ರಂದು ಕಟೀಲಿನ 6ನೇ ಯಕ್ಷಗಾನ ಮೇಳ ಸಮರ್ಪಣೆ

ಮೂಲ್ಕಿ : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ದೇವಳದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ನೂತನ ಆರನೇ ಮೇಳದ ಸಮರ್ಪಣೆ ಹಾಗೂ ಎಲ್ಲ ಆರು ಮೇಳಗಳ ಪ್ರಸ್ತುತ ಸಾಲಿನ ತಿರುಗಾಟದ ಆರಂಭೋತ್ಸವ 8ರಂದು ಕಟೀಲಿನ ರಥಬೀದಿಯಲ್ಲಿ ಜರಗಲಿದೆ. ದೇವಳದಲ್ಲಿ ಯಕ್ಷಗಾನ ಸೇವೆಯು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿಂದ ಬರುತ್ತಿದ್ದು, ಈಗಾಗಲೇ ಸುಮಾರು 15 ವರ್ಷಗಳವರೆಗೆ ಹರಕೆ ಬಯಲಾಟಗಳ ಮುಂಗಡ ಬುಕ್ಕಿಂಗ್ ಆಗಿದೆ. ಭಕ್ತರ ಆಶಯದಂತೆ ಈ ಬಾರಿ ಆರನೇ ಮೇಳ ಆರಂಭಿಸಲಾಗುತ್ತಿದೆ. ಬೇಗನೆ ತಿರುಗಾಟ: ಈ ಹಿಂದೆ ದೀಪೋತ್ಸವದ ಬಳಿಕ ಮೇಳಗಳು ತಿರುಗಾಟ ಆರಂಭಿಸುತ್ತಿದ್ದು, ಈ ಬಾರಿ ಅಷ್ಟಮಂಗಳ ಪ್ರಶ್ನೆಯಲ್ಲಿ ಹೇಳಿದಂತೆ ದೇವರ ಒಪ್ಪಿಗೆ ಪಡೆದು ದೀಪೋತ್ಸವಕ್ಕಿಂತ 20 ದಿನ ಮೊದಲೇ ತಿರುಗಾಟ ಆರಂಭಿಸಲಾಗುತ್ತಿದೆ. 8ರಂದು ಕಟೀಲಿನ ರಥಬೀದಿಯಲ್ಲಿ ಏಕ ಕಾಲದಲ್ಲಿ ಆರು ಮೇಳಗಳು ಒಂದೇ ಸ್ಥಳದಲ್ಲಿ ಆರು ರಂಗಸ್ಥಳದಲ್ಲಿ ಪ್ರದರ್ಶನ ನೀಡುವ ಮೂಲಕ ತಿರುಗಾಟಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.

ಕೃಪೆ : http://www.kannadaprabha.com/


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ